ಕೌತ್ಸ

ವಿಶ್ವಾಮಿತ್ರನ ಶಿಷ್ಯ. ದೂರ್ವಾಸಮುನಿಯನ್ನು ಸತ್ಕರಿಸುವ ಸಮಯದಲ್ಲಿ ತನಗೆ ನೆರವಾದ ಕೌತ್ಸನ ನಿಷ್ಟೆಯನ್ನು ಮೆಚ್ಚಿದ ವಿಶ್ವಾಮಿತ್ರ ಸಕಲ ವಿದ್ಯೆಗಳೂ ಲಭಿಸಲಿ ಎಂದು ಅನುಗ್ರಹಿಸಿದ. ತಾನು ಕಲಿತ 14 ವಿದ್ಯೆಗಳಿಗೆ ಪ್ರತಿಯಾಗಿ ಗುರುದಕ್ಷಿಣೆ ಏನನ್ನು ಕೊಡಲಿ ಎಂದು ಕೌತ್ಸ ಮತ್ತೆ ಮತ್ತೆ ಕೇಳಿದಾಗ ಕುಪಿತನಾದ ವಿಶ್ವಾಮಿತ್ರ ಒಂದೊಂದು ವಿದ್ಯೆಗೆ ಒಂದೊಂದು ಕೋಟಿಯಂತೆ 14 ಕೋಟಿ ಹೊನ್ನನ್ನು ಕೊಡುವಂತೆ ಆಜ್ಞಾಪಿಸಿದ. ಕೌತ್ಸನಾದರೋ ಸೂರ್ಯವಂಶದ ರಘುಮಹಾರಾಜನಿಂದ ಅಷ್ಟೂ ಹಣವನ್ನು ಪಡೆದು ಗುರುವಿಗೆ ಸಮರ್ಪಿಸಿದ. ಈ ವಿಷಯ ಸ್ಕಾಂದಪುರಾಣದಲ್ಲಿದೆ. ಕಾಳಿದಾಸನ ರಘುವಂಶದಲ್ಲಿ ಈ ಕಥೆ ಬರುತ್ತದಾದರು ಅಲ್ಲಿ ಕೌತ್ಸ ವರತಂತುವಿನ ಶಿಷ್ಯನೆನ್ನಲಾಗಿದೆ.   								(ಕೆ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ